ಗ್ರೇಟರ್ ಬೆಂಗಳೂರು (Greater Bengaluru Election) ಚುನಾವಣೆಗೆ ಬಿಜೆಪಿ (BJP Karnataka )ಯೂ ಸಿದ್ಧತೆ ಆರಂಭಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ನೇತೃತ್ವದಲ್ಲಿ ಸಂಯೋಜಕರ ತಂಡ, ಸಂಘಟನಾತ್ಮಕ ಜಿಲ್ಲೆಯ ಸಂಯೋಜಕರು ಮತ್ತು 5 ಪಾಲಿಕೆಗಳಿಗೆ ಪ್ರಮುಖರು ಮತ್ತು ಸಹ ಪ್ರಮುಖರನ್ನು ನೇಮಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಯೋಜಕರ ತಂಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್‌ನಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಎಸ್.ಸುರೇಶ್ ಕುಮಾರ್, ಸಂಸದೆ ಕುಮಾರಿ ಶೋಭಾ ಕರಂದ್ಲಾಜೆ, ಸಂಸದ ಪಿ.ಸಿ.ಮೋಹನ್, ಸಂಸದ ಡಾ.ಸಿ.ಎನ್.ಮಂಜುನಾಥ್, ಸಂಸದ ತೇಜಸ್ವಿಸೂರ್ಯ, ಸಂಸದ ಡಾ.ಕೆ.ಸುಧಾಕರ್, ಮಾಜಿ ಶಾಸಕ ಎನ್.ಎಸ್.ನಂದೀಶ್ ರೆಡ್ಡಿ ಇದ್ದಾರೆ.
ಸಂಘಟನಾತ್ಮಕ ಜಿಲ್ಲೆಯ ಪ್ರಮುಖರಾಗಿ ಬೆಂಗಳೂರು ದಕ್ಷಿಣಕ್ಕೆ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ, ಬೆಂಗಳೂರು ಉತ್ತರಕ್ಕೆ ಮಾಜಿ ಉಪಮೇಯರ್ ಎಸ್.ಹರೀಶ್, ಬೆಂಗಳೂರು ಕೇಂದ್ರಕ್ಕೆ ಎ.ಆರ್. ಸಪ್ತಗಿರಿ ಗೌಡ ಅವರನ್ನು ನೇಮಿಸಲಾಗಿದೆ.
ಪಾಲಿಕೆ ಪ್ರಮುಖರು ಮತ್ತು ಸಹ ಪ್ರಮುಖರನ್ನಾಗಿ ಬೆಂಗಳೂರು ಪೂರ್ವಕ್ಕೆ ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್, ಕೆ.ಎಸ್.ನವೀನ್, ಬೆಂಗಳೂರು ಉತ್ತರಕ್ಕೆ ಶಾಸಕ ಮುನಿರತ್ನ ನಾಯ್ಡು ಮತ್ತು ಭಾರತಿ ಶೆಟ್ಟಿ, ಬೆಂಗಳೂರು ದಕ್ಷಿಣಕ್ಕೆ ಬೈರತಿ ಬಸವರಾಜ್, ಪರಿಷತ್‌ನಲ್ಲಿ ಬಿಜೆಪಿ ಮುಖ್ಯ ಸಚೇತಕ ಎನ್.ರವಿಕುಮಾರ್, ಬೆಂಗಳೂರು ಕೇಂದ್ರಕ್ಕೆ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಂಎಲ್‌ಸಿ ಡಿ.ಎಸ್.ಅರುಣ್, ಬೆಂಗಳೂರು ಪಶ್ಚಿಮಕ್ಕೆ ಮಾಜಿ ಸಚಿವ ಡಾ.ಕೆ.ಗೋಪಾಲಯ್ಯ, ಎ.ನಾರಾಯಣಸ್ವಾಮಿ, ಅಶ್ವತ್ಥ್ ನಾರಾಯಣ ಅವರನ್ನು ನೇಮಿಸಿ ಬಿಜೆಪಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.


