ನಗರ ಪಾಲಿಕೆ ನೇಮಕಾತಿ ಹಗರಣ ಸಂಬಂಧ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ ಬರೋಬ್ಬರೀ 3 ಕೋಟಿ ರೂಪಾಯಿ ಮೊತ್ತದಷ್ಟು ನಗದನ್ನು ವಶಪಡಿಸಿಕೊಂಡಿದೆ.
ಕೋಲ್ಕತ್ತಾ ಮುನ್ಸಿಪಾಲಿಟಿ ನೇಮಕಾತಿ ಹಗರಣ ಸಂಬಂಧ ಜಾರಿ ನಿರ್ದೇಶಾಲಯ ಅಕ್ಟೋಬರ್ 28 ಮತ್ತು 29ರಂದು ಎರಡು ದಿನ ಶೋಧ ಕೈಗೊಂಡಿತ್ತು.

ರೇಡಿಯೆಂಟ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್, ಗರೋಡಿಯಾ ಸೆಕ್ಯೂರಿಟೀಸ್ ಲಿಮಿಟೆಡ್, ಜೀತ್ ಕನ್‌ಸ್ಟ್ರಕ್ಷನ್ ಮತ್ತು ಕನ್ಸಲ್‌ಟೆಂಟ್ಸ್‌ನ ನಿರ್ದೇಶಕರು, ಮಾಲೀಕರ ಕಚೇರಿಗಳು ಮತ್ತು ನಿವಾಸಗಳ ಮೇಲೆ ಈಡಿ ದಾಳಿ ನಡೆಸಿತ್ತು.
ದಾಳಿ ವೇಳೆ ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.


