ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ BJP ಶಾಸಕ ಸುರೇಶ್‌ ಕುಮಾರ್‌, ಕನ್ನಡಪ್ರಭದಿಂದ ಸುಳ್ಳು ಸುದ್ದಿ..!

ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌ ಸುರೇಶ್‌ ಕುಮಾರ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.

ಇದೇ ಸೋಮವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಸಿದ್ದರಾಮಯ್ಯ ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದರು. ಆ ಸೇತುವೆಯ ನಾಮಫಲಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಮೆಯನ್ನು ಸ್ಥಾಪಿಸಲಾಗಿತ್ತು.

ಆದರೆ ಮಾಜಿ ಶಿಕ್ಷಣ ಮಂತ್ರಿಯಾಗಿರುವ ಸುರೇಶ್‌ ಕುಮಾರ್‌ ಅವರು ಸಿದ್ದರಾಮಯ್ಯನವರು ತಮ್ಮದೇ ಪ್ರತಿಮೆಯನ್ನು ಅನಾವರಣಗೊಳಿಸಿ ತಮ್ಮ ಪ್ರತಿಮೆಗೆ ತಾವೇ ಹಾರ ಹಾಕಿ ಅಭಿನಂದಿಸ್ತಿರುವ ಫೋಟೋವನ್ನು ಹಂಚಿಕೊಂಡು ಮುಖ್ಯಮಂತ್ರಿಗಳ ಬಗ್ಗೆ ಕುಚೋದ್ಯ ಮಾಡಿದ್ದರು.

ಚಪ್ಪಾಳೆ.. ಇಷ್ಟು ದಿನ ಇವರ ಪಾರ್ಟಿಯ ನಾಯಕರು ತಮಗೆ ತಾವೇ ಭಾರತರತ್ನ ಪ್ರಶಸ್ತಿ ಕೊಟ್ಕೊಂಡಿದ್ದಾರೆ. ಇದೀಗ ನಮ್ಮ ಮುಖ್ಯಮಂತ್ರಿಗಳು ತಮ್ಮ ಪತ್ರಿಮೆಯನ್ನು ತಾವೇ ಅನಾವರಣ ಮಾಡುತ್ತಿರುವುದು ನಿಜಕ್ಕೂ ಚಪ್ಪಾಳೆ ಮೂಲಕ ಸ್ವಾಗತಿಸಬೇಕಾದ ಸಂಗತಿ

ಎಂದು ಫೋಟೋ ಹಂಚಿಕೊಂಡು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಸುರೇಶ್‌ ಬರೆದುಕೊಂಡಿದ್ದರು.

ಆದರೆ ಇದು ನಿಜವಾದ ಫೋಟೋ ಅಲ್ಲ, ಬದಲಿಗೆ ಎಐ ಫೋಟೋ ಎಂದು ಗೊತ್ತಾದ ಬಳಿಕ ಆ ಪೋಸ್ಟನ್ನೇ ಡಿಲೀಟ್‌ ಮಾಡಿದ್ದಾರೆ ಸುರೇಶ್‌ ಕುಮಾರ್‌. ಈ ಹಿಂದೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಶಾಸಕ ಸುರೇಶ್‌ ಕುಮಾರ್‌ ಸುಳ್ಳು ಫೋಸ್ಟ್‌ಗಳನ್ನು ಹಾಕಿ ತಗ್ಲಾಕ್ಕೊಂಡಿದ್ದರು.

ವಿಚಿತ್ರ ಎಂದರೆ ಕನ್ನಡದ ಪ್ರಮುಖ ದಿನಪತ್ರಿಕೆ ಕನ್ನಡಪ್ರಭ ಕೂಡಾ ಇದೇ ಫೋಟೋವನ್ನು ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ ಸಿದ್ದರಾಮಯ್ಯನವರ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿತ್ತು. ಇದು ಎಐ ಫೋಟೋ ಈಗ ಕನ್ನಡಪ್ರಭದ ಸಂಪಾದಕರು ವಿಷಾದ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮದೇ ಪುತ್ಥಳಿಗೆ ಹಾರ ಹಾಕುತ್ತಿರುವ ಎಐ ಬಳಸಿ ರಚಿಸಲಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಆದರೆ ಅದು ಎಐನಿಂದ ರಚನೆಯಾದದ್ದು ಎಂದು ತಿಳಿಯುವಷ್ಟರಲ್ಲಿ ಆ ಫೋಟೋ ಕನ್ನಡಪ್ರಭದ ಕೆಲವು ಆವೃತ್ತಿಗಳಲ್ಲಿ ಪ್ರಕಟವಾಗಿತ್ತು. ಕಣ್ತಪ್ಪಿನಿಂದಾದ ಈ ಅಚಾತುರ್ಯ ಗಮನಕ್ಕೆ ಬರುತ್ತಿದ್ದಂತೆ ಸಂಪಾದಕೀಯ ಸಿಬ್ಬಂದಿ ಎಐ ಸೃಷ್ಟಿತ ಫೋಟೋವನ್ನು ಕೈಬಿಟ್ಟಿದ್ದರು. ಆದಾಗ್ಯೂ ಕೆಲವೆಡೆ ಅದೇ ಫೋಟೋ ಪ್ರಕಟವಾಗಿರುವುದಕ್ಕೆ ಪತ್ರಿಕೆ ವಿಷಾದಿಸುತ್ತದೆ

ಎಂದು ಕನ್ನಡಪ್ರಭದ ಸಂಪಾದಕರು ಸ್ಪಷ್ಟನೆಯೊಂದಿಗೆ ವಿಷಾದಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರತಿಕ್ಷಣ Exclusive: ಲೆಕ್ಸಿಂಗ್‌ಟನ್‌ ಆಸ್ಪತ್ರೆ ವಿರುದ್ಧ ತನಿಖಾ ವರದಿ ಸಲ್ಲಿಕೆ, ಇನ್ನೂ ಬಂದಿಲ್ಲ ಎಂದ DHO ಕಚೇರಿ..! ಸುಳ್ಳು ಹೇಳ್ತಿರೋದು ಯಾರು..?

ಬೆಂಗಳೂರಿನ ರಾಜಾಜಿನಗರದಲ್ಲಿರುವ ಖಾಸಗಿ ಆಸ್ಪತ್ರೆ ಕೆಪಿಎಂಇ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿದೆ ಎಂಬ...

ಪ್ರಧಾನಿ ಮೋದಿ ಸರ್ಕಾರಕ್ಕೆ ಲೋಕಸಭೆಯಲ್ಲೇ ಸೋಲು – ಮೀಸಲಾತಿ ಮಸೂದೆ ತಿರಸ್ಕಾರ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ...

ಬ್ರಿಟನ್‌ ಪೌರತ್ವ: ರಾಹುಲ್‌ ಗಾಂಧಿ ವಿರುದ್ಧ FIR ದಾಖಲಿಸಿ ತನಿಖೆಗೆ ಸೂಚನೆ

ಭಾರತದ ಪೌರತ್ವದ ಜೊತೆಗೆ ಬ್ರಿಟನ್‌ನ ಪೌರತ್ವವನ್ನು ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ...

ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವನಪರ್ಯಂತ ಜೈಲು – ಕೋರ್ಟ್‌ ತೀರ್ಪು

ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ....