ಬ್ರಿಟನ್‌ ಪೌರತ್ವ: ರಾಹುಲ್‌ ಗಾಂಧಿ ವಿರುದ್ಧ FIR ದಾಖಲಿಸಿ ತನಿಖೆಗೆ ಸೂಚನೆ

ಭಾರತದ ಪೌರತ್ವದ ಜೊತೆಗೆ ಬ್ರಿಟನ್‌ನ ಪೌರತ್ವವನ್ನು ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಅಲಹಾಬಾದ್‌ ಹೈಕೋರ್ಟ್‌ ಆದೇಶಿಸಿದೆ.

ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಸುಭಾಷ್‌ ವಿದ್ಯಾರ್ಥಿ ಅವರಿದ್ದ ಪೀಠ ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಲಕ್ನೋದ ಎಸಿಜೆಎಂ ಕೋರ್ಟ್‌ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.

ಕರ್ನಾಟಕ ಬಿಜೆಪಿ ಕಾರ್ಯಕರ್ತ ವಿಘ್ನೇಶ್‌ ಶಿಶಿರ್‌ ಅವರು ರಾಹುಲ್‌ ಗಾಂಧಿ ದ್ವಿಪೌರತ್ವ ಪ್ರಶ್ನಿಸಿ ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಭಾರತೀಯ ನ್ಯಾಯ ಸಂಹಿತೆ, ಪಾಸ್‌ಪೋರ್ಟ್‌ ಕಾಯ್ದೆ, ಗೌಪ್ಯತೆ ಕಾಯ್ದೆ, ವಿದೇಶಿ ಕಾಯ್ದೆಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಕೋರಿದ್ದರು.

ಬ್ರಿಟನ್‌ ಎಆಜಧಾನಿ ಲಂಡನ್‌ನಲ್ಲಿ ಸ್ಥಾಪನೆಗೊಂಡಿದ್ದ ಬ್ಯಾಕ್‌ಪ್ಸ್‌ ಲಿಮಿಟೆಡ್‌ಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ತಾವು ಬ್ರಿಟನ್‌ ಪ್ರಜೆ ಎಂದು ರಾಹುಲ್‌ ಗಾಂಧಿ ಘೋಷಿಸಿಕೊಂಡಿದ್ದರು. ಜೊತೆಗೆ ಬ್ರಿಟನ್‌ ಪ್ರಜೆಯಾಗಿ ಲಂಡನ್‌ ಮತ್ತು ಹ್ಯಾಪಿಸ್ಪೈರ್‌ ವಿಳಾಸ ಹೊಂದಿರುವ ಕಂಪನಿ ನಿರ್ದೇಶಕ ಐಡಿಯನ್ನೂ ಹೊಂದಿದ್ದರು.

೨೦೦೫ ಮತ್ತು ೨೦೦೬ರಲ್ಲಿ ಸಲ್ಲಿಸಲಾಗಿದ್ದ ಕಂಪನಿಯ ವಾರ್ಷಿಕ ಲೆಕ್ಕಪತ್ರಗಳಲ್ಲೂ ರಾಹುಲ್‌ ಗಾಂಧಿ ತಮ್ಮದು ಬ್ರಿಟಿಷ್‌ ಪೌರತ್ವ ಎಂದು ಘೋಷಿಸಿಕೊಂಡಿದ್ದರು.

೨೦೦೯ರಲ್ಲಿ ಈ ಕಂಪನಿಯನ್ನು ವಿಸರ್ಜನೆ ಮಾಡಲಾಯಿತು. ಆದರೆ ೨೦೦೪ರ ಲೋಕಸಭಾ ಚುನಾವಣೆಯಲ್ಲಿ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಬ್ಯಾಕ್‌ಪ್ಸ್‌ ಕಂಪನಿಯ ಮಾಲೀಕತ್ವ, ಬ್ರಿಟನ್‌ ಪೌರತ್ವ ಹಾಗೂ ಬ್ರಿಟನ್‌ನಲ್ಲಿರುವ ಬಾರ್ಕ್‌ಲೇಸ್‌ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರ ಬಗ್ಗೆ ಘೋಷಿಸಿಕೊಂಡಿದ್ದರು ಎಂದು ಬಿಜೆಪಿ ಕಾರ್ಯಕರ್ತ ಶಿಶಿರ್‌ ವಾದಿಸಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KAS ಅಧಿಕಾರಿ ಶೀತಲ್‌ T.S.ಗೆ ಕಂದಾಯ ಇಲಾಖೆಯಲ್ಲಿ ಆಗಿರುವ ಸಮಸ್ಯೆ ಏನು..?

ಕೆಎಎಸ್‌ ಅಧಿಕಾರಿ ಶೀತಲ್‌ ಟಿ.ಎಸ್‌.ಗೆ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಡಿರುವ...

ಪ್ರತಿಕ್ಷಣ Exclusive: ಲೆಕ್ಸಿಂಗ್‌ಟನ್‌ ಆಸ್ಪತ್ರೆ ವಿರುದ್ಧ ತನಿಖಾ ವರದಿ ಸಲ್ಲಿಕೆ, ಇನ್ನೂ ಬಂದಿಲ್ಲ ಎಂದ DHO ಕಚೇರಿ..! ಸುಳ್ಳು ಹೇಳ್ತಿರೋದು ಯಾರು..?

ಬೆಂಗಳೂರಿನ ರಾಜಾಜಿನಗರದಲ್ಲಿರುವ ಖಾಸಗಿ ಆಸ್ಪತ್ರೆ ಕೆಪಿಎಂಇ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿದೆ ಎಂಬ...

ಪ್ರಧಾನಿ ಮೋದಿ ಸರ್ಕಾರಕ್ಕೆ ಲೋಕಸಭೆಯಲ್ಲೇ ಸೋಲು – ಮೀಸಲಾತಿ ಮಸೂದೆ ತಿರಸ್ಕಾರ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ...

ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವನಪರ್ಯಂತ ಜೈಲು – ಕೋರ್ಟ್‌ ತೀರ್ಪು

ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ....