ಹಾಸನಾಂಬ ದರ್ಶನಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸೋಮವಾರ ಮತ್ತು ಮಂಗಳವಾರಕ್ಕಿಂತಲೂ ಬುಧವಾರವಾದ ಇಂದು ದೇವಿಯ ದರ್ಶನ ವೇಗವಾಗಿ ನಡೆದಿದೆ.
ನಾಳೆ ಅಂದರೆ ಗುರುವಾರ ದರ್ಶನ ಸಮಯವನ್ನು ದಯವಿಟ್ಟು ಗಮನಿಸಿ. ಗುರುವಾರ ಮಧ್ಯಾಹ್ನ 2 ರಿಂದ 3.30 ರವರೆಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ಅಲ್ಲದೆ, ಅಲಂಕಾರ ಬದಲಾವಣೆಯಿಂದಾಗಿ ಗುರುವಾರ ಮಧ್ಯರಾತ್ರಿ 12 ರಿಂದ ಶುಕ್ರವಾರ ಬೆಳಿಗ್ಗೆ 5 ರವರೆಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಇದಲ್ಲದೆ, ಗುರುವಾರ ರಾತ್ರಿ 10 ಗಂಟೆಗೆ ಪ್ರವೇಶ ದ್ವಾರಗಳು ಮುಚ್ಚಲ್ಪಡುತ್ತವೆ ಮತ್ತು ಶುಕ್ರವಾರ ಬೆಳಿಗ್ಗೆ ಮತ್ತೆ ತೆರೆಯಲ್ಪಡುತ್ತವೆ. ಭಕ್ತಾದಿಗಳು ದಯವಿಟ್ಟು ಈ ವೇಳಾಪಟ್ಟಿಗೆ ಅನುಗುಣವಾಗಿ ದೇವಾಲಯಕ್ಕೆ ಆಗಮಿಸುವಂತೆ ಯೋಜಿಸಿ
ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮನವಿ ಮಾಡಿದ್ದಾರೆ.



