ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ (Local Bodies Election) ಹಿಂದುಳಿದ ವರ್ಗಕ್ಕೆ (Backward Classes) ಶೇಕಡಾ 42ರಷ್ಟು ಮೀಸಲಾತಿ (Reservation) ನೀಡುವ ತೆಲಂಗಾಣ ಸರ್ಕಾರದ (Telagana) ಕಾಯ್ದೆಗೆ ತಡೆ ನೀಡಿದ್ದ ತೆಲಂಗಾಣ ಹೈಕೋರ್ಟ್ (Telagana High Court) ಆದೇಶವನ್ನು ಪ್ರಶ್ನಿಸಿ ತೆಲಂಗಾಣ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು (Special Leave Petition) ಸುಪ್ರೀಂಕೋರ್ಟ್ (Supreme Court) ವಜಾಗೊಳಿಸಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಈ ಮೀಸಲಾತಿ ಹೆಚ್ಚಳವಿಲ್ಲದೆಯೇ ಚುನಾವಣೆಗೆ ನೀವು ಮುಂದುವರೆಯಬಹುದು ಎಂದು ತೆಲಂಗಾಣ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಹೇಳಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ಹೆಚ್ಚಿಸುವ ವಿಧೇಯಕವನ್ನು ರಾಜ್ಯಪಾಲರು ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ತಮಿಳುನಾಡು (Tamilnadu) ಮತ್ತು ರಾಜ್ಯಪಾಲರ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪಿನ ಆಧಾರದಲ್ಲಿ ಮೀಸಲಾತಿ ಹೆಚ್ಚಳ ಮಸೂದಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ ಎಂದು ಭಾವಿಸಿ ಮಸೂದೆಯನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ಆ ಕಾಯ್ದಗೆ ತೆಲಂಗಾಣ ಹೈಕೋರ್ಟ್ ತಡೆ ನೀಡಿತ್ತು.
ಮೀಸಲಾತಿ ಪ್ರಮಾಣ ಶೇಕಡಾ 50ರ ಗಡಿ ದಾಟಬಾರದು ಎಂದು ಗವಾಲಿ ಪ್ರಕರಣದಲ್ಲಿ ಈ ಹಿಂದೆ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು ಎಂದು ಇವತ್ತು ವಿಚಾರಣೆ ವೇಳೆ ನ್ಯಾಯಮೂರ್ತಿ ವಿಕ್ರಂ ನಾಥ್ ಅವರು ತೆಲಂಗಾಣ ಸರ್ಕಾರಕ್ಕೆ ಪ್ರಶ್ನಿಸಿದರು.
ಆದರೆ ಸಾಮಾಜಿಕ ಮತ್ತು ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗಳನ್ನು ಆಧಾರವಾಗಿರುವ ದತ್ತಾಂಶಗಳು ಲಭ್ಯವಾದರೆ ಶೇಕಡಾ 50ರ ಮಿತಿಯನ್ನು ಮೀರಬಾರದು ಎಂದು ಗವಾಲಿ ಪ್ರಕರಣದಲ್ಲೇ ಸುಪ್ರೀಂಕೋರ್ಟ್ ಹೇಳಿದೆ ಎಂದು ತೆಲಂಗಾಣ ಸರ್ಕಾರದ ಪರ ಹಾಜರಾಗಿದ್ದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ಈ ಸಮೀಕ್ಷೆಯನ್ನು ಕೈಗೊಂಡಿರುವ ಏಕೈಕ ರಾಜ್ಯ ತೆಲಂಗಾಣ ಮತ್ತು ಮೀಸಲಾತಿ ಹೆಚ್ಚಳ ಸಂಬಂಧ ವಿಧಿಸಲಾಗಿರುವ ಮೂರು ಷರತ್ತುಗಳನ್ನೂ ತೆಲಂಗಾಣ ಪೂರೈಸಿದೆ ಎಂದು ಸಿಂಘ್ವಿ ಅವರು ವಾದಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಈ ಮೀಸಲಾತಿ ಇಲ್ಲದೆಯೇ ಮುಂದುವರೆಯಬಹುದು ಎಂದು ತೆಲಂಗಾಣ ಸರ್ಕಾರಕ್ಕೆ ಹೇಳಿ ನ್ಯಾಯಮೂರ್ತಿ ವಿಕ್ರಂ ನಾಥ್ (Justice Vikram Nath) ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ (Justice Sandeep Mehta) ಅವರಿದ್ದ ಸುಪ್ರೀಂಕೋರ್ಟ್ ಪೀಠ ತೆಲಂಗಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಇವತ್ತು ವಜಾಗೊಳಿಸಿತು.


