ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ (Karnataka State Fire And Emergency Services) ಕರ್ತವ್ಯದ ವೇಳೆ ಮೃತಪಟ್ಟರೆ ನೀಡಲಾಗುವ ಗುಂಪು ವಿಮಾ ಮೊತ್ತವನ್ನು ಈಗಿರುವ 20 ಲಕ್ಷ ರೂಪಾಯಿಗಳಿಂದ 50 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ವಿಮಾ ಮೊತ್ತವನ್ನು ಹೆಚ್ಚಿಸಿ ಒಳಾಡಳಿತ ಇಲಾಖೆ ಆಧೀನ ಕಾರ್ಯದರ್ಶಿ ಬಿ.ಕೆ.ಭುವನೇಂದ್ರ ಕುಮಾರ್ ಆದೇಶ ಹೊರಡಿಸಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಗ್ನಿಶಾಮಕ ಹುದ್ದೆಯಿಂದ ನಿರ್ದೇಶಕರ ಹುದ್ದೆಯವರೆಗೆ ಮಾತ್ರ ಕರ್ತವ್ಯದ ಮೇಲಿರುವಾಗ ಮೃತಪಟ್ಟಲ್ಲಿ ಗುಂಪು ವಿಮಾ ಮೊತ್ತವನ್ನು ರೂ. 20.00 ಲಕ್ಷಗಳಿಂದ ರೂ. 50.00 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಈ ಯೋಜನೆಯನ್ನು ವಿಮಾ ಕಂಪನಿಗೆ ವಹಿಸದೇ ಆಕಸ್ಮಿಕ/ಅಪಘಾತದಲ್ಲಿ ಮೃತಪಟ್ಟ ಕರ್ತವ್ಯನಿರತ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಉದ್ಯೋಗಿಗಳ ಕುಟುಂಬಗಳಿಗೆ ನೀಡುವ ವಿಶೇಷ ಗುಂಪು ವಿಮಾ ಮೊತ್ತವನ್ನು ನೇರವಾಗಿ ಇಲಾಖೆಯ ಸಂಬಂಧಪಟ್ಟ ಲೆಕ್ಕಶೀರ್ಷಿಕೆಯಡಿ ಪಾವತಿ ಮಾಡಲು ಸೂಚಿಸಿ ಆದೇಶಿಸಲಾಗಿದೆ
ಎಂದು ಆದೇಶದಲ್ಲಿ ಹೇಳಲಾಗಿದೆ.
ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಇವರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಸೇವಾವರ ಇಲಾಖೆಯಾಗಿದ್ದು, ಕೇಂದ್ರ ಸರ್ಕಾರದಿಂದ ಪ್ರಥಮ ಸ್ಪಂದನಾ ಇಲಾಖೆಯೆಂದು ಪರಿಗಣಿಸಲ್ಪಟ್ಟಿದ್ದು, ಈ ಇಲಾಖೆಯ ಅಧಿಕಾರಿ/ಸಿಬ್ಬಂದಿಯವರು ಅಗ್ನಿಕರೆ, ರಕ್ಷಣಾ ಕರೆ, ಪ್ರವಾಹ, ಕಟ್ಟಡ ಕುಸಿತ, ಭೂ ಕುಸಿತದಂತಹ ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ವಿಕೋಪಗಳಲ್ಲಿ ಸಾರ್ವಜನಿಕರ ಪ್ರಾಣ ಹಾಗೂ ಆಸ್ತಿಪಾಸ್ತಿಯನ್ನು ರಕ್ಷಿಸುವಲ್ಲಿ
ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆಂದು ಹಾಗೂ ಪೊಲೀಸರು ಗುಂಪಿನಲ್ಲಿ ಕರ್ತವ್ಯ
ನಿರ್ವಹಿಸಿದರೆ ಅಗ್ನಿಶಾಮಕ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಧೈರ್ಯವಾಗಿ ಒಬ್ಬೊಬ್ಬರೇ ಏಕಾಂಗಿಯಾಗಿ ನಿಂತು ಬಹಳ ತೀಕ್ಷ್ಮವಾದ, ಕಷ್ಟಕರವಾದ ಸಂದರ್ಭಗಳಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಸಾರ್ವಜನಿಕ ಪ್ರಾಣ ಹಾಗೂ ಆಸ್ತಿ- ಪಾಸ್ತಿಯನ್ನು ರಕ್ಷಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವಾಗ ಜೀವಹಾನಿಯಾಗುವ ಸಂಭವವಿರುತ್ತದೆಂದು ತಿಳಿಸಿರುತ್ತಾರೆ.ಇತ್ತೀಚಿನ ದಿನಗಳಲ್ಲಿ ಇಲಾಖೆಯ ಕಾರ್ಯವ್ಯಾಪ್ತಿ ಹೆಚ್ಚಾದಂತೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಜವಾಬ್ದಾರಿಗಳು ಸಹ ಹೆಚ್ಚಾಗಿರುತ್ತವೆ ಇದರಿಂದಾಗಿ ಇಲಾಖೆಯಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರ ಮನೋಸ್ಥೆರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಥವಾ ಅಪಘಾತ ಸಂದರ್ಭಗಳಲ್ಲಿ ಮೃತಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಯವರುಗಳ ಕುಟುಂಬ ವರ್ಗದವರಿಗೆ ಪೊಲೀಸ್
ಇಲಾಖೆಯಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಗ್ನಿಶಾಮಕ ಹುದ್ದೆಯಿಂದ ನಿರ್ದೇಶಕ ಹುದ್ದೆಯವರೆಗಿನ ಹಾಲಿ ಕಾರ್ಯನಿರತ ಒಟ್ಟು 5321 ಅಧಿಕಾರಿ ಮತ್ತು ಸಿಬ್ಬಂದಿಯವರುಗಳಿಗೆ ದಿನಾಂಕ: 17-10-2023 ರಿಂದ ಪೂರ್ವಾನ್ವಯವಾಗುವಂತೆ ವಿಶೇಷ ಗುಂಪು | ವಿಮಾ ಮೊತ್ತವನ್ನು ರೂ. 20.00 ಲಕ್ಷಗಳಿಂದ ರೂ. 50.00 ಲಕ್ಷಗಳಿಗೆ ಹೆಚ್ಚಿಸುವಂತೆ ಹಾಗೂ ಈ ವಿಮಾ ಮೊತ್ತವನ್ನು ಪೊಲೀಸ್ ಇಲಾಖೆಯಂತೆ ವಿಮಾ ಕಂಪನಿಯ ಬದಲಾಗಿ ಇಲಾಖೆಯ ಲೆಕ್ಕಶೀರ್ಷಿಕೆಯಡಿಯಲ್ಲಿ ಭರಿಸಲು ಮಂಜೂರಾತಿ ಆದೇಶ ಹೊರಡಿಸುವಂತೆ ಕೋರಿ
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಪೊಲೀಸ್ ಮಹಾ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದರು.


