ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Assembly Election) ರಾಷ್ಟ್ರೀಯ ಜನತಾದಳ (RJD), ಕಾಂಗ್ರೆಸ್ (Congress) ಒಳಗೊಂಡ ಮಹಾ ಮೈತ್ರಿಕೂಟದಲ್ಲಿ (MGB) ಭಾರೀ ಬಿರುಕು ಕಾಣಿಸಿಕೊಂಡಿದೆ.
ಇಂಡಿಯಾ ಮೈತ್ರಿಕೂಟದ (INDIA Alliance) ಪ್ರಮುಖ ಪಾಲುದಾರ ಪಕ್ಷವಾಗಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಬಿಹಾರದಲ್ಲಿ ಸ್ವತಂತ್ರವಾಗಿ ಮತ್ತು ಪ್ರತ್ಯೇಕವಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದೆ.
ಬಿಹಾರದ ಚಕೈ, ಧಾಮ್‌ದಹಾ, ಕಟೋರಿಯಾ (ST), ಮನಿಹಾರಿ (ST), ಜಮುಯಿ ಮತ್ತು ಪಿರ್‌ಪೈನಾತಿ ಹೀಗೆ ಒಟ್ಟು 6 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಕ್ಕೆ ತೀರ್ಮಾನಿಸಿದೆ.
ನವೆಂಬರ್ 6 ಮತ್ತು ನವೆಂಬರ್ 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.
ನವೆಂಬರ್ 6ರಂದು 121 ಕ್ಷೇತ್ರಗಳಿಗೆ ನಡೆಯುವ ಮೊದಲ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಕೊನೆಯಾಗಿದೆ. 2ನೇ ಹಂತದ ಮತದಾನದಲ್ಲಿ 122 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಬಾಕಿ ಇದೆ.
ಇಂಡಿಯಾ ಮೈತ್ರಿಕೂಟದಲ್ಲಿ ಜೆಎಂಎಂ ಪ್ರಮುಖ ಪಾಲುದಾರ ಪಕ್ಷವಾಗಿದ್ದು, ಜಾರ್ಖಂಡ್‌ನಲ್ಲಿ JMM ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವಿದೆ. ಬಿಹಾರವನ್ನು ವಿಭಜಿಸಿ ಜಾರ್ಖಂಡ್ ರಾಜ್ಯವನ್ನು ರಚಿಸಲಾಗಿತ್ತು. ಹೀಗಾಗಿ ಬಿಹಾರದಲ್ಲೂ ರಾಜಕೀಯ ಅಸ್ತಿತ್ವಕ್ಕಾಗಿ JMM ಇಂಡಿಯಾ ಮೈತ್ರಿಕೂಟದಿಂದ ಹೊರಬಂದು ಚುನಾವಣೆಯನ್ನು ಎದುರಿಸುತ್ತಿದೆ.


