ಚಿನ್ನದಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ 70 ವರ್ಷದ ಕಳ್ಳಿ ಅಜ್ಜಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ರಾಜ್ಯದ ಸೇಲಂ ಪಟ್ಟಣದ ಸಂಡೈಪೇಟೆಯ 70 ವರ್ಷದ ಗೌರಮ್ಮ ಬಂಧಿತ ಕಳ್ಳಿ ಅಜ್ಜಿ.

ಆಗಸ್ಟ್ 19ರಂದು ಚಿಕ್ಕಬಳ್ಳಾಪುರದಲ್ಲಿರುವ ನವೀನ್ ಕುಮಾರ್ ಎಂಬವರು ನಡೆಸುತ್ತಿದ್ದ ಬಂಗಾರದ ಅಂಗಡಿಗೆ ಗೌರಮ್ಮ ಮತ್ತು ಆಕೆಯ ಜೊತೆಗೆ ಮತ್ತೊಬ್ಳಳು ಮಹಿಳೆ ಹೋಗಿದ್ದರು. ಹಳೆಯ ಬಂಗಾರದ ಒಡವೆಗಳನ್ನು ಬದಲಿಸಿ ಹೊಸ ಬಂಗಾರದ ಒಡವೆಗಳನ್ನು ಕೊಡುವಂತೆ ಕೇಳಿದ್ದರು.

ಹಳೆಯ ಬಂಗಾರದ ಒಡವೆ ಎಂದು ನಕಲಿ ಬಂಗಾರದ ಆಭರಣದ ನೀಡಿದ್ದ ಇಬ್ಬರೂ ಕಳ್ಳಿ ಅಜ್ಜಿಯರು ಅಂಗಡಿ ಮಾಲೀಕರ ಗಮನ ಬೇರೆಡೆ ಸೆಳೆದು ಅಂಗಡಿಯಲ್ಲಿಟ್ಟಿದ್ದ ಬಂಗಾರದ ಆಭರಣವನ್ನು ಕದ್ದಿದ್ದರು.
ಈ ಕಳ್ಳಿ ಅಜ್ಜಿಯರ ಪತ್ತೆಗೆ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ರಂಜನ್ ಕುಮಾರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.

70 ವರ್ಷದ ಕಳ್ಳಿ ಅಜ್ಜಿ ಗೌರಮ್ಮನನ್ನು ಬಂಧಿಸಿದ ಪೊಲೀಸರು ಆಕೆಯಿಂದ 16.9 ಗ್ರಾಂ ತೂಕದ 2 ಲಕ್ಷದ 3 ಸಾವಿರ ರೂಪಾಯಿ ಮೌಲ್ಯದ ಬಂಗಾರದ ನೆಕ್ಲೇಸ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


