ಆರ್‌ಎಸ್‌ಎಸ್ ಪಥ ಸಂಚಲನಕ್ಕೆ 12 ಕಾರಣಗಳನ್ನು ನೀಡಿ ಚಿತ್ತಾಪೂರ ತಹಶೀಲ್ದಾರ್ ಅನುಮತಿಯನ್ನು ನಿರಾಕರಿಸಿದ್ದಾರೆ.
- ಸದರಿ ಪಥಸಂಚಲನದಲ್ಲಿ ಎಷ್ಟು ಮಂದಿ ಭಾಗವಹಿಸುತ್ತಾರೆ ಎಂಬ ಮಾಹಿತಿ ನೀಡಿಲ್ಲ
- ಸದರಿ ಪಥ ಸಂಚಲನದಲ್ಲಿ ಚಿತ್ತಾಪೂರ ತಾಲೂಕು ಹೊರತು ಪಡಿಸಿ ಬೇರೆ ತಾಲೂಕು ಅಥವಾ ಬೇರೆ ಜಿಲ್ಲೆಯ ಎಷ್ಟು ಜನರು ಭಾಗವಹಿಸುತ್ತಾರೆ ಎಂಬ ಮಾಹಿತಿ ನೀಡಿಲ್ಲ
- ಬಜಾಜ ಕಲ್ಯಾಣ ಮಂಟಪ ಆವರಣದ ಮಾಲೀಕರ ಅನುಮತಿ ಪತ್ರ ಸಲ್ಲಿಸಿರುವುದಿಲ್ಲ
- ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುಂಜಾಗೃತ ಕ್ರಮ ವಹಿಸುವ ಒಪ್ಪಿಗೆ ಪತ್ರ ಸಲ್ಲಿಸಿಲ್ಲ
- ಲಾಠಿ ಅಥವಾ ಆಯುಧಗಳ ಕುರಿತು ಮಾಹಿತಿ ನೀಡಿರುವುದಿಲ್ಲ
- ತಮ್ಮ ಸಂಘದ ನೋಂದಣಿ ಪ್ರಮಾಣ ಪತ್ರದ ದೃಢೀಕರಣದ ಪ್ರತಿ ಸಲ್ಲಿಸಿರುವುದಿಲ್ಲ
- ಸದರಿ ಕಾರ್ಯಕ್ರಮದಲ್ಲಿ ಯಾರು ಮುಖ್ಯ ಭಾಷಣಕಾರರು ಭಾಗವಹಿಸುವವರ ಬಗ್ಗೆ ಅವರ ಪೂರ್ಣ ಮಾಹಿತಿ ಸಲ್ಲಿಸಿರುವುದಿಲ್ಲ
- ಸದರಿ ಪಥ ಸಂಚಲನ ಕಾರ್ಯಕ್ರಮ ಕುರಿತ ತುರ್ತು ಸಂವಹನ ಕೈಗೊಳ್ಳಲು ಜವಾಬ್ದಾರಿಯುತ ೧೦ ಜನ ಸ್ಥಳೀಯ ಮುಖಂಡರ ಮಾಹಿತಿ ಸಲ್ಲಿಸಿರುವುದಿಲ್ಲ
- ಸದರಿ ಪಥ ಸಂಚಲನ ಕಾರ್ಯಕ್ರಮವು ಸ್ಥಳೀಯರ ಚಿತ್ತಾಪುರ ಘಟಕದಿಂದ ಕೈಗೊಳ್ಳುತ್ತಿದ್ದಿರೋ ಅಥವಾ ಮತ್ತಾವ್ಯ ಘಟಕದಿಂದ ಕೈಗೊಳ್ಳುತ್ತಿರುವ ಬಗ್ಗೆ ಸ್ಪಷ್ಟೀಕರಣ ನೀಡಿಲ್ಲ
- ಪಥ ಸಂಚಲನ ಕಾರ್ಯಕ್ರಮವು ಮಧ್ಯಾಹ್ನ ೩ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಅಂತ ತಿಳಿಸಿದ್ದು ಆದರೆ ಮುಕ್ತಾಯದ ಸಮಯದ ಬಗ್ಗೆ ಮಾಹಿತಿ ನೀಡಿರುವುದಿಲ್ಲ
- ಸದರಿ ಪಥ ಸಂಚಲನ ಕಾರ್ಯಕ್ರಮದ ಮೂಲ ಉದ್ದೇಶದ ಬಗ್ಗೆ ಮಾಹಿತಿ ಸಲ್ಲಿಸಿರುವುದಿಲ್ಲ
- ಉಲ್ಲೇಖದ ತಮ್ಮ ಮನವಿ ಪತ್ರದಲ್ಲಿ ದಿನಾಂಕ ೧೭-೧೦-೨೦೨೫ರಂದು ವಿನಂತಿ ಪತ್ರ ನೀಡಿರುತ್ತೇನೆ ಎಂದು ತಿಳಿಸಿದ್ದೀರಿ. ಆದರೆ ತಾವು ನಮ್ಮ ಕಚೇರಿಗೆ ಯಾವುದೇ ಪತ್ರ ಸಲ್ಲಿಸಿರುವುದಿಲ್ಲ ಎಂದು ಕಂಡು ಬರುತ್ತಿದೆ
ಈ ಮೇಲ್ಕಂಡ ಎಲ್ಲಾ ದಾಖಲೆಗಳನ್ನು ಕಚೇರಿಗೆ ಸಲ್ಲಿಸಿದ ನಂತರ ನಿಯಾಮನುಸಾರ ಕ್ರಮ ವಹಿಸಲಾಗುವುದು ಎಂದು ಈ ಮೂಲಕ ಹಿಂಬರಹ ನೀಡಿದೆ
ಎಂದು ಚಿತ್ತಾಪೂರ ತಹಶೀಲ್ದಾರ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘಕದ ಕಲ್ಬುರ್ಗಿ ಜಿಲ್ಲಾ ವ್ಯವಸ್ಥ ಪ್ರಮುಖ ಪ್ರಹ್ಲಾದ ವಿಶ್ವಕರ್ಮ ಅವರಿಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮತ್ತು ವಿಜಯದಶಮಿಯ ಹಿನ್ನೆಲೆಯಲ್ಲಿ ಚಿತ್ತಾಪೂರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ನಿರ್ಧರಿಸಿತ್ತು.
ಆದರೆ ಇವತ್ತು ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ ಪಥ ಸಂಚಲನಕ್ಕೆ ಮೊನ್ನೆಯಷ್ಟೇ ಅನುಮತಿ ಕೇಳಿ ಪತ್ರ ನೀಡಿದ್ದಾಗಿ ಆರ್‌ಎಸ್‌ಎಸ್ ಹೇಳಿತ್ತು. ಆದರೆ ತಹಶೀಲ್ದಾರ್ ಅವರು ನೀಡಿದ ಹಿಂಬರಹದ ಪ್ರಕಾರ ತಹಶೀಲ್ದಾರ್ ಕಚೇರಿಗೆ ಯಾವುದೇ ಪತ್ರ ಸಲ್ಲಿಕೆಯಾಗಿಲ್ಲ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದ್ದಾರೆ.


