9 ರಾಜ್ಯ, 3 ಕೇಂದ್ರಾದಳಿತ ಪ್ರದೇಶಗಳಲ್ಲಿ SIR

ಭಾರತೀಯ ಚುನಾವಣಾ ಆಯೋಗ (Election Commission of India) ನಾಳೆಯಿಂದ 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ (Electoral Roll) ಪರಿಷ್ಕರಣೆಗಾಗಿ ವಿಶೇಷ ತೀವ್ರಸ್ವರೂಪದ ಅಭಿಯಾನ (SIR) ಆರಂಭಿಸಲಿದೆ.

ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷದ್ವೀಪ, ಪುದುಚೇರ, 9 ರಾಜ್ಯಗಳಾದ ಛತ್ತೀಸ್‌ಗಢ, ಗುಜರಾತ್‌, ಗೋವಾ, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಉತ್ತರಪ್ರದೇಶದಲ್ಲಿ ನಾಳೆಯಿಂದಲೇ ಪ್ರಕ್ರಿಯೆ ಆರಂಭವಾಗಲಿದೆ.

ಈ ಒಂಭತ್ತು ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 50 ಕೋಟಿ 99 ಲಕ್ಷ ಮತದಾರರಿದ್ದಾರೆ.

1951ರಿಂದ 2004ರವರೆಗೆ 8 ಬಾರಿ ದೇಶದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಕೈಗೊಳ್ಳಲಾಗಿದೆ. 21 ವರ್ಷಗಳ ಹಿಂದೆ 2002-2004 ಅವಧಿಯಲ್ಲಿ ದೇಶದಲ್ಲಿ ಎಸ್‌ಐಆರ್‌ ನಡೆದಿತ್ತು.

ಭಾರತದ ನಾಗರಿಕರಾಗಿರುವ 18 ವರ್ಷ ತುಂಬಿರುವ ಕ್ಷೇತ್ರದ ನಿವಾಸಿಗಳು ಭಾರತದ ಸಂವಿಧಾನದ 326ರ ವಿಧಿ ಪ್ರಕಾರ ಅರ್ಹ ಮತದಾರರಾಗಿರುತ್ತಾರೆ.

ನಾಳೆಯಿಂದ ಎಸ್‌ಐಆರ್‌ಗೆ (SIR) ಸಂಬಂಧಿಸಿದಂತೆ ನವೆಂಬರ್‌ 3ರವರೆಗೆ ತರಬೇತಿ ನೀಡಲಾಗುತ್ತದೆ. ನವೆಂಬರ್‌ 3 ರಿಂದ ಡಿಸೆಂಬರ್‌ 4 ರವರೆಗೆ ಪ್ರತಿ ಮನೆಗೂ ಭೇಟಿಯನ್ನು ನೀಡಲಾಗುತ್ತದೆ.

ಡಿಸೆಂಬರ್‌ರಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಡಿಸೆಂಬರ್‌ 9ರಿಂದ ಜನವರಿ 8, 2026ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದೆ. ಡಿಸೆಂಬರ್‌ 9 ರಿಂದ ಜನವರಿ 31 ರವರೆಗೆ ವಾದಗಳನ್ನು ಆಲಿಸಿ ದೃಢೀಕರಿಸಲಾಗುತ್ತದೆ.

ಫೆಬ್ರವರಿ 7 ರಂದು ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

Bengaluru: ಟ್ರಾಫಿಕ್‌ ಸಿಗ್ನಲ್‌ ಬಳಿ ವಾಹನಗಳನ್ನು ನಿಲ್ಲಿಸುವಂತಿಲ್ಲ – ಬೆಂಗಳೂರಲ್ಲಿ ಹೊಸ ನಿಯಮ

ಗ್ರೇಟರ್‌ ಬೆಂಗಳೂರು (Greater Bengaluru) ನಗರದ ಸಿಗ್ನಲ್‌ಗಳಿಂದ 75 ಮೀಟರ್ ವ್ಯಾಪ್ತಿಯಲ್ಲಿ...

Bengaluru: ಫುಟ್‌ಪಾತ್‌ ಮೇಲೆ ವ್ಯಾಪಾರಕ್ಕೆ ಜುಲೈ 1ರಿಂದಲೇ ನಿಷೇಧ – ಸಚಿವ ಕೃಷ್ಣ ಬೈರೇಗೌಡ

ಜಿಬಿಎ (GBA) ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿ (footpath) ಉಂಟಾಗಿರುವ ಒತ್ತುವರಿಗಳನ್ನು ಅಂಗಡಿ...

Bengaluru: ವಾರ್ಡ್ ರಸ್ತೆ ಅಭಿವೃದ್ಧಿಗಾಗಿ 2000 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ : ಸಚಿವ ಕೃಷ್ಣ ಬೈರೇಗೌಡ

ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ವಾರ್ಡ್ ರಸ್ತೆಗಳನ್ನು ಸುಧಾರಿಸಿ ಅಭಿವೃದ್ಧಿಪಡಿಸಲು...