BIG BREAKING: ಬೊಮ್ಮಾಯಿ ಸರ್ಕಾರದಲ್ಲಿ ಅತೀ ದೊಡ್ಡ ಭೂ ಅಕ್ರಮ – CBI ತನಿಖೆಗೆ ಹೈಕೋರ್ಟ್‌ ಆದೇಶ

2023ರ ವಿಧಾನಸಭಾ ಚುನಾವಣೆ ಘೋಷಣೆಗೂ ಕೆಲವೇ ದಿನ ಮೊದಲು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ನಡೆದಿದ್ದ ಅತೀ ದೊಡ್ಡ ಭೂ ಹಗರಣ ಸಂಬಂಧ CBI ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ D.K.ಸಿಂಗ್‌ ಮತ್ತು ನ್ಯಾಯಮೂರ್ತಿ ವಿತಸ್ತಾ ಗಂಜು ಅವರಿದ್ದ ವಿಭಾಗೀಯ CBI ತನಿಖೆಗೆ ಆದೇಶಿಸಿದೆ.

2000ನೇ ಇಸವಿಯಲ್ಲಿ ಆಗಿನ್ನೂ ಅಸ್ವಿತ್ವೇ ಇಲ್ಲದ ಲೇಕ್‌ ವ್ಯೂ ಟೂರಿಸಂ ಕಾರ್ಪೋರೇಷನ್‌ 250 ಕೋಟಿ ರೂಪಾಯಿ ಮೊತ್ತದ ಹೂಡಿಕೆಯೊಂದಿಗೆ ಒಂದೂವರೆ ವರ್ಷದಲ್ಲಿ ಉದ್ಯಮ ಆರಂಭಿಸುವ ಉದ್ದೇಶದೊಂದಿಗೆ ಭೂಮಿ ಮಂಜೂರು ಮಾಡುವಂತೆ ಕೆಐಎಡಿಬಿ (KIADB) ಮೂಲಕ ರಾಜ್ಯ ಸರ್ಕಾರಕ್ಕೆ P.ಸತೀಶ್‌ ಪೈ ಎಂಬವರು ಅರ್ಜಿಯನ್ನು ಸಲ್ಲಿಸಿದ್ದರು.

ಈ ಅರ್ಜಿಯ ಮೇರೆಗೆ 2000ರ ಜೂನ್‌ನಲ್ಲಿ ರಾಜ್ಯ ಸರ್ಕಾರ ಹೆಬ್ಬಾಳ ಮತ್ತು ಅಮಾನಿಕೆರೆ ಗ್ರಾಮಗಳಲ್ಲಿ 37 ಎಕರೆ ಭೂ ಸ್ವಾಧೀನಕ್ಕೆ ಒಪ್ಪಿಗೆಯನ್ನು ನೀಡಿತ್ತು. ಇದಾದ ಬಳಿಕ ಮತ್ತೆ 2001ರಲ್ಲಿ ಭೂ ಸ್ವಾಧೀನದ ಪ್ರಮಾಣವನ್ನು 70 ಎಕರೆಗೆ ಏರಿಸಲು ಒಪ್ಪಿಗೆಯನ್ನು ನೀಡಿತ್ತು. ಈ ವೇಳೆ S.M.ಕೃಷ್ಣ ಸರ್ಕಾರ ಅಸ್ತಿತ್ವದಲ್ಲಿತ್ತು. ಎಸ್‌.ಎಂ.ಕೃಷ್ಣ ಸರ್ಕಾರದಲ್ಲಿ ಆರಂಭವಾಗಿದ್ದ ಈ ಅಕ್ರಮಕ್ಕೆ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಹೊಸ ರೂಪ ಸಿಕ್ಕಿತ್ತು.

2023ರ ಮಾರ್ಚ್‌ 7ರಂದು ಆಗ ಬೃಹತ್‌ ಕೈಗಾರಿಕೆ ಸಚಿವರಾಗಿದ್ದ ಮುರುಗೇಶ್‌ ನಿರಾಣಿ ನೇತೃತ್ವದ ರಾಜ್ಯ ಉನ್ನತದ ಮಟ್ಟದ ಮಂಜೂರಾತಿ ಸಮಿತಿಯೂ ಭೂ ಬಳಕೆಯ ಉದ್ದೇಶವನ್ನು ಬದಲಾಯಿಸುವುದಕ್ಕೆ ಒಪ್ಪಿಗೆಯನ್ನು ನೀಡಿತ್ತು.

ಅಶ್ವಿತ ಪ್ರಾಪರ್ಟಿಸ್‌ ಡೆವೆಲಪರ್ಸ್‌ ಲಿಮಿಟೆಡ್‌, ಶಿವಶಕ್ತಿ ಎಸ್ಟೇಟ್‌ ಮತ್ತು ಇನ್‌ವೆಸ್ಟ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಜೊತೆಗೆ ಲೇಕ್‌ ವ್ಯೂ ಟೂರಿಸಂ ಕಾರ್ಪೋರೇಷನ್‌ ಪಾಲುದಾರಿಕೆ ಮಾಡಿಕೊಂಡಿದೆ ಎಂದು 2023ರಲ್ಲಿ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿತ್ತು. ಅಲ್ಲದೇ 2004ರಲ್ಲಿ ಈ ಪಾಲುದಾರಿಕೆಯನ್ನು ಮಾಡಿಕೊಳ್ಳಲಾಗಿತ್ತು ಎಂದು ದಾಖಲೆಗಳನ್ನು ಸಲ್ಲಿಸಲಾಗಿತ್ತು.

ಆದರೆ ಲೇಕ್‌ ವ್ಯೂ ಟೂರಿಸಂ ಕಾರ್ಪೋರೇಷನ್‌ ಲಿಮಿಟೆಡ್‌ ಕಂಪನಿ ಸ್ಥಾಪನೆ ಆಗಿದ್ದೇ 2011ರ ಜನವರಿ 4ರಂದು.

ಆದರೂ ಕೂಡಾ 2023ರ ಮಾರ್ಚ್‌ನಲ್ಲಿ ಸಚಿವರಾಗಿದ್ದ ಮುರುಗೇಶ್‌ ನಿರಾಣಿ ನೇತೃತ್ವದ ಸಮಿತಿಯು ರಿಯಲ್‌ ಎಸ್ಟೇಟ್‌ಗೆ ಭೂ ಬಳಕೆಗೆ ಒಪ್ಪಿಗೆಯನ್ನು ನೀಡಿತ್ತು.

Pratikshana

ಲೇಕ್‌ ವ್ಯೂ ಟೂರಿಸಂ ಕಾರ್ಪೋರೇಷನ್‌ ಲಿಮಿಟೆಡ್‌ಗೆ 10 ಲಕ್ಷ ರೂಪಾಯಿ ದಂಡ ವಿಧಿಸಿರುವ ವಿಭಾಗೀಯ ಪೀಠ, ದಂಡದ ಮೊತ್ತ ಸೈನಿಕರ ಕ್ಷೇಮಾಭಿವೃದ್ಧಿ ನಿಧಿಗೆ ಸಲ್ಲಿಸುವಂತೆ ಸೂಚಿಸಿದೆ.

ಈ ಅಕ್ರಮದಲ್ಲಿ ಭಾಗಿಯಾಗಿರುವ ಸರ್ಕಾರಿ ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ CBIಗೆ ಹೈಕೋರ್ಟ್‌ ಆದೇಶಿಸಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರತಿಕ್ಷಣ Exclusive: ಲೆಕ್ಸಿಂಗ್‌ಟನ್‌ ಆಸ್ಪತ್ರೆ ವಿರುದ್ಧ ತನಿಖಾ ವರದಿ ಸಲ್ಲಿಕೆ, ಇನ್ನೂ ಬಂದಿಲ್ಲ ಎಂದ DHO ಕಚೇರಿ..! ಸುಳ್ಳು ಹೇಳ್ತಿರೋದು ಯಾರು..?

ಬೆಂಗಳೂರಿನ ರಾಜಾಜಿನಗರದಲ್ಲಿರುವ ಖಾಸಗಿ ಆಸ್ಪತ್ರೆ ಕೆಪಿಎಂಇ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿದೆ ಎಂಬ...

ಪ್ರಧಾನಿ ಮೋದಿ ಸರ್ಕಾರಕ್ಕೆ ಲೋಕಸಭೆಯಲ್ಲೇ ಸೋಲು – ಮೀಸಲಾತಿ ಮಸೂದೆ ತಿರಸ್ಕಾರ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ...

ಬ್ರಿಟನ್‌ ಪೌರತ್ವ: ರಾಹುಲ್‌ ಗಾಂಧಿ ವಿರುದ್ಧ FIR ದಾಖಲಿಸಿ ತನಿಖೆಗೆ ಸೂಚನೆ

ಭಾರತದ ಪೌರತ್ವದ ಜೊತೆಗೆ ಬ್ರಿಟನ್‌ನ ಪೌರತ್ವವನ್ನು ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ...

ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವನಪರ್ಯಂತ ಜೈಲು – ಕೋರ್ಟ್‌ ತೀರ್ಪು

ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ....