Election: ಬಿಜೆಪಿಗೆ ಭಾರೀ ಗೆಲುವು – ಕಾಂಗ್ರೆಸ್‌ಗೆ ಸ್ಥಾನಗಳ ಹೆಚ್ಚಳದ ಸಮಾಧಾನ

ಗೋವಾದಲ್ಲಿ ನಡೆದ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ (Goa ZP Election Results) ಬಿಜೆಪಿ (BJP) ಮತ್ತು ಮೈತ್ರಿಕೂಟ ಮೇಲುಗೈ ಸಾಧಿಸಿದೆ. ಕಳೆದ ಬಾರಿಗೆ ಹೋಲಿಸಿದ್ರೆ ಈ ಬಾರಿ ಕಾಂಗ್ರೆಸ್‌ (Congress) ತನ್ನ ಹಿಡಿತ ಬಿಗಿಗೊಳಿಸಿದೆ.

29 ಜಿಲ್ಲಾ ಪಂಚಾಯತ್‌ ಸ್ಥಾನಗಳಲ್ಲಿ ಬಿಜೆಪಿ ಗೆದ್ದರೆ, ಬಿಜೆಪಿ ಮಿತ್ರಪಕ್ಷವಾಗಿರುವ MGP 3ರಲ್ಲಿ ಗೆದ್ದಿದೆ. ಈ ಮೂಲಕ ಎನ್‌ಡಿಎ 32 ಸ್ಥಾನಗಳನ್ನು ಗೆದ್ದುಕೊಂಡಿದೆ.

ಕಾಂಗ್ರೆಸ್‌ 10 ಸ್ಥಾನಗಳಲ್ಲಿ, ಕಾಂಗ್ರೆಸ್‌ ಮಿತ್ರಪಕ್ಷ GFP 1ರಲ್ಲಿ ಗೆದ್ದಿದೆ. ಈ ಮೂಲಕ ಕಾಂಗ್ರೆಸ್‌ ಮೈತ್ರಿಕೂಟ 11ರಲ್ಲಿ ಗೆದ್ದಿದೆ.

RGP 2ರಲ್ಲಿ, ಆಮ್‌ ಆದ್ಮಿ ಪಕ್ಷ 1ರಲ್ಲಿ, ಪಕ್ಷೇತರ ಅಭ್ಯರ್ಥಿಗಳು 4 ಸ್ಥಾನಗಳಲ್ಲಿ ಗೆದ್ದಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ 33 ಜಿಲ್ಲಾ ಪಂಚಾಯತ್‌ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್‌ 4 ಸ್ಥಾನಗಳನ್ನಷ್ಟೇ ಗೆದ್ದುಕೊಂಡಿತ್ತು. ಆ ಹಿನ್ನೆಲೆಯಲ್ಲಿ ಬಿಜೆಪಿ ಈಗಲೂ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದ ಖುಷಿಯಲ್ಲಿದ್ದರೆ, ಸ್ಥಾನಗಳ ಸಂಖ್ಯೆ ಹೆಚ್ಚಿಸಿಕೊಂಡ ಕಾರಣಕ್ಕೆ ಈ ಚುನಾವಣಾ ಫಲಿತಾಂಶ ಕಾಂಗ್ರೆಸ್‌ ಸಮಾಧಾನವನ್ನು ನೀಡಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರತಿಕ್ಷಣ Exclusive: ಲೆಕ್ಸಿಂಗ್‌ಟನ್‌ ಆಸ್ಪತ್ರೆ ವಿರುದ್ಧ ತನಿಖಾ ವರದಿ ಸಲ್ಲಿಕೆ, ಇನ್ನೂ ಬಂದಿಲ್ಲ ಎಂದ DHO ಕಚೇರಿ..! ಸುಳ್ಳು ಹೇಳ್ತಿರೋದು ಯಾರು..?

ಬೆಂಗಳೂರಿನ ರಾಜಾಜಿನಗರದಲ್ಲಿರುವ ಖಾಸಗಿ ಆಸ್ಪತ್ರೆಗಿರುವ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ಲೆಕ್ಸಿಂಗ್‌ ಟನ್‌...

ಪ್ರಧಾನಿ ಮೋದಿ ಸರ್ಕಾರಕ್ಕೆ ಲೋಕಸಭೆಯಲ್ಲೇ ಸೋಲು – ಮೀಸಲಾತಿ ಮಸೂದೆ ತಿರಸ್ಕಾರ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ...

ಬ್ರಿಟನ್‌ ಪೌರತ್ವ: ರಾಹುಲ್‌ ಗಾಂಧಿ ವಿರುದ್ಧ FIR ದಾಖಲಿಸಿ ತನಿಖೆಗೆ ಸೂಚನೆ

ಭಾರತದ ಪೌರತ್ವದ ಜೊತೆಗೆ ಬ್ರಿಟನ್‌ನ ಪೌರತ್ವವನ್ನು ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ...

ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವನಪರ್ಯಂತ ಜೈಲು – ಕೋರ್ಟ್‌ ತೀರ್ಪು

ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ....