BJP ಪರ ಅಡ್ಡ ಮತದಾನ: ಕಾಂಗ್ರೆಸ್‌ನಿಂದ ಐವರು ಶಾಸಕರು ಅಮಾನತು

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಐವರು ಶಾಸಕರನ್ನು ಕಾಂಗ್ರೆಸ್‌ ಪಕ್ಷ ಅಮಾನತು ಮಾಡಿದೆ.

ಹರಿಯಾಣ ವಿಧಾನಸಭೆಯ ಐವರು ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿ ಹರಿಯಾಣ ಕಾಂಗ್ರೆಸ್‌ ಅಧ್ಯಕ್ಷ ರಾವ್‌ ನರೇಂದರ್‌ ಸಿಂಗ್‌ ಆದೇಶ ಹೊರಡಿಸಿದ್ದಾರೆ.

ಅಮಾನತ್ತಾದ ಶಾಸಕರು:
ನರೈನ್‌ಘರ್‌ ಕ್ಷೇತ್ರದ ಶಾಸಕರಾದ ಶ್ಯಾಲಿ ಚೌಧರಿ, ಸದೌರಾ ಕ್ಷೇತ್ರದ ಶಾಸಕರಾದ ರೇಣು ಬಾಲಾ, ರಟಿಯಾ ಕ್ಷೇತ್ರದ ಶಾಸಕರಾದ ಜರ್ನೈಲ್‌ ಸಿಂಗ್‌, ಪುಹಾನಾ ಕ್ಷೇತ್ರದ ಶಾಸಕರಾದ ಮೊಹಮ್ಮದ್‌ ಇಲಿಯಾಸ್‌ ಮತ್ತು ಹಥಿನ್‌ ಕ್ಷೇತ್ರದ ಶಾಸಕರಾದ ಮೊಹಮ್ಮದ್‌ ಇಸ್ರೈಲ್‌.

ಹರಿಯಾಣ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಕರ್ಮವೀರ್‌ ಸಿಂಗ್‌ ಬೌಧ್‌ ವಿರುದ್ಧ ಹಾಗೂ ಬಿಜೆಪಿ ಅಭ್ಯರ್ಥಿಯಾಗಿದ್ದಸತೀಶ್‌ ನಂದಲ್‌ ಪರ ತಮ್ಮ ಮತ ಚಲಾವಣೆ ಮಾಡಿದ್ದರು.

ತನ್ನದೇ ಪಕ್ಷದ ಐವರು ಶಾಸಕರ ಅಡ್ಡಮತದಾನದ ಹೊರತಾಗಿಯೂ ಕಾಂಗ್ರೆಸ್‌ನ ಕರ್ಮವೀರ್‌ ಸಿಂಗ್‌ ಗೆಲುವು ಸಾಧಿಸಿದ್ದರು.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48 ಮತ್ತು ಕಾಂಗ್ರೆಸ್‌ 37 ಶಾಸಕರನ್ನು ಹೊಂದಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

Bengaluru: ಟ್ರಾಫಿಕ್‌ ಸಿಗ್ನಲ್‌ ಬಳಿ ವಾಹನಗಳನ್ನು ನಿಲ್ಲಿಸುವಂತಿಲ್ಲ – ಬೆಂಗಳೂರಲ್ಲಿ ಹೊಸ ನಿಯಮ

ಗ್ರೇಟರ್‌ ಬೆಂಗಳೂರು (Greater Bengaluru) ನಗರದ ಸಿಗ್ನಲ್‌ಗಳಿಂದ 75 ಮೀಟರ್ ವ್ಯಾಪ್ತಿಯಲ್ಲಿ...

Bengaluru: ಫುಟ್‌ಪಾತ್‌ ಮೇಲೆ ವ್ಯಾಪಾರಕ್ಕೆ ಜುಲೈ 1ರಿಂದಲೇ ನಿಷೇಧ – ಸಚಿವ ಕೃಷ್ಣ ಬೈರೇಗೌಡ

ಜಿಬಿಎ (GBA) ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿ (footpath) ಉಂಟಾಗಿರುವ ಒತ್ತುವರಿಗಳನ್ನು ಅಂಗಡಿ...

Bengaluru: ವಾರ್ಡ್ ರಸ್ತೆ ಅಭಿವೃದ್ಧಿಗಾಗಿ 2000 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ : ಸಚಿವ ಕೃಷ್ಣ ಬೈರೇಗೌಡ

ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ವಾರ್ಡ್ ರಸ್ತೆಗಳನ್ನು ಸುಧಾರಿಸಿ ಅಭಿವೃದ್ಧಿಪಡಿಸಲು...